ರಾತ್ರಿ ಎಂಟು ಗಂಟೆಯ ಸುಗಮ ಬಸ್ ನಿಧಾನಕ್ಕೆ ಬೆಂಗಳೂರಿನ ಎಲ್ಲ ದಾರಿ ಮೂಸಿಕೊಂಡು, ಪೇಟೆ ಬಿಟ್ಟು ಮಂಗಳೂರಿನ ಕಡೆಗಿರುವ ಹೆದ್ದಾರಿಗೆ ಸೇರುವಾಗ ಹತ್ತೂವರೆ ಆಗಿಯೇ ಆಗುತ್ತಿತ್ತು. ಬೆಳಗ್ಗಿನ ಮೈಂದು ಬೀಳುವ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪಂಪವೆಲ್ ತಲುಪಿ ಇಳಿಯುವಾಗ, ಘಟ್ಟದ ತಿರುವುಗಳಲ್ಲಿ ಅಲುಗಾಡಿದ ಜೀವ ಒಮ್ಮೆಲೇ ಮೈಯೊಳಗೆ ಬಂದುಬಿಡುವುದು. ಗಡಿಬಿಡಿಯಲ್ಲಿ ಭಾರದ ಬ್ಯಾಗನ್ನು ಬೆನ್ನಿಗಿಡಲು ಪುರುಸೊತ್ತಿಲ್ಲದೆ ಬಸ್ಸಿನಿಂದ ಕೆಳಗಿಳಿಯುವ ಆತುರದಲ್ಲಿ, ಬ್ಯಾಗ್ ಇಳಿಸಿಕೊಡುತ್ತೇನೆನ್ನುವ…