ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ |ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ || ಧೃತರಾಷ್ಟ್ರನ ಹತಾಶೆಯ ಹಪಹಪದೊಂದಿಗೇ ಹರಿಯದೊಡಗುತ್ತದೆ ಮಹಾಕವಿ ಶ್ರೀವೇದವ್ಯಾಸರ ಮಹಾಭಾರತ ಮಹಾಕಾವ್ಯ. ಮೊದಲ ನೂರರಷ್ಟು ಶ್ಲೋಕಗಳು ಪೀಠಿಕೆ. ಇದರಲ್ಲಿ ಸೂತ ಪುರಾಣಿಕರು ನೈಮಿಷಾರಣ್ಯದಲ್ಲಿ ಯಜ್ಞಾನಂತರ ವಿಶ್ರಮಿಸುತ್ತಿದ್ದಾಗ, ಮೈಯೆಲ್ಲಾ ಕಿವಿಯಾಗಿ ಕಥೆ ಕೇಳಲುತ್ಸುಕರಾಗಿದ್ದ ತಮ್ಮ ಶಿಷ್ಯರಿಗೆ ಮಹಾಭಾರತದ ಕಥೆ ಹೇಳಲು ಆರಂಭಿಸಿದರು ಎನ್ನುವ ಪ್ರಸ್ತಾವನೆ ಬರುತ್ತದೆ. ಹಾಗೂ ಕಥೆಯ ಹಿನ್ನೆಲೆಯನ್ನೂ ಸ್ವಲ್ಪ…