ನೇತ್ರಾವತಿಯ ಸಂಗಮದಲ್ಲಿ…

ರಾತ್ರಿ ಎಂಟು ಗಂಟೆಯ ಸುಗಮ ಬಸ್ ನಿಧಾನಕ್ಕೆ ಬೆಂಗಳೂರಿನ ಎಲ್ಲ ದಾರಿ ಮೂಸಿಕೊಂಡು, ಪೇಟೆ ಬಿಟ್ಟು ಮಂಗಳೂರಿನ ಕಡೆಗಿರುವ ಹೆದ್ದಾರಿಗೆ ಸೇರುವಾಗ ಹತ್ತೂವರೆ ಆಗಿಯೇ ಆಗುತ್ತಿತ್ತು. ಬೆಳಗ್ಗಿನ ಮೈಂದು ಬೀಳುವ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪಂಪವೆಲ್ ತಲುಪಿ ಇಳಿಯುವಾಗ, ಘಟ್ಟದ ತಿರುವುಗಳಲ್ಲಿ ಅಲುಗಾಡಿದ ಜೀವ ಒಮ್ಮೆಲೇ ಮೈಯೊಳಗೆ ಬಂದುಬಿಡುವುದು. ಗಡಿಬಿಡಿಯಲ್ಲಿ ಭಾರದ ಬ್ಯಾಗನ್ನು ಬೆನ್ನಿಗಿಡಲು ಪುರುಸೊತ್ತಿಲ್ಲದೆ ಬಸ್ಸಿನಿಂದ ಕೆಳಗಿಳಿಯುವ  ಆತುರದಲ್ಲಿ, ಬ್ಯಾಗ್ ಇಳಿಸಿಕೊಡುತ್ತೇನೆನ್ನುವ…

ಮದಿಮ್ಮಾಳು

ಹವ್ಯಕ ಭಾಷೆಲಿ ಒಂದು ಕಥೆ ಉದಿಯಪ್ಪಗಳೇ ಅಬ್ಬೆ ದಿನುಗೋಳುದು, ಎಲ್ಲಿಯೋ ದೂರಲ್ಲಿ ಗುಡ್ಡೆಲಿ “ಏಳು, ಉದಿಯಾಯ್ದು, ಶಾಲೆಗೆ  ಹೋಪಲಿಲ್ಲೆಯ!” ಹೇಳಿದ ಹಾಂಗೆ ಕೇಳ್ತಾ ಇತ್ತು.. ಯೋ… ಏಳೆಕ್ಕೇ ಹೇಳಿ ಚೂರು ಬೇಜಾರುದೆ, ನಿನ್ನೆ ಕೋಪಿ ಬರೆಯದ್ದೇ ಹಾಂಗೆ ಮನುಗಿದ್ದು ನೆನಪಾಗಿ ಇನ್ನುದೇ ಉಪದ್ರ ಆತು. ಅಷ್ಟೊತ್ತಿಂಗೆ ಅಬ್ಬೆಯೇ ಉಪ್ಪರಿಗೆ ಹತ್ತಿ ಬಂದು, “ಇನ್ನು ಏಳದ್ರೆ ಆಗ” ಹೇಳಿಯಪ್ಪಗ, ಆತಂಬಗ ಏಳ್ತೆ, ಆದರೂ ಒಳಾಂದ…