ನಮ್ಮ ಊರಿಗಿಂತ ಅಮೆರಿಕದವರು ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತದೆ ಉಳಿದ ಪ್ರಪಂಚ. ನಿಜವೂ ಹೌದು. ಹಾಗಿದ್ದರೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗರು ಹಾಗೆಯೇ ಇದ್ದಾರಾ? ಇಲ್ಲ ಎನ್ನುತ್ತಿದ್ದಾರೆ ಅರಿಝೋನದ ಕನ್ನಡಿಗರು. ಅರಿಝೋನ ಅಮೆರಿಕಾದ ಒಂದು ರಾಜ್ಯ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ತುಂಬಾ ಜನ ಕನ್ನಡಿಗರು ಇಲ್ಲಿ ವಾಸ ಮಾಡುತ್ತಾ ಇದ್ದಾರೆ. ಕೆಲವು ದಶಕಗಳ ಹಿಂದೆ ಹಲವು ಉತ್ಸಾಹಿ ಕನ್ನಡಿಗರು ಸೇರಿ ಕಟ್ಟಿದ…