ಭರತ

ಹಗಲೆಲ್ಲಾ ಮುಗಿದಿತ್ತು ಆಗಷ್ಟೇ, ಎಂದಿನಂತೆ ಕೇಕಯದ ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿ-ಮನುಷ್ಯರು ಅಂದಿನ ರಾತ್ರಿಯ ನೀರವ ಕತ್ತಲೆಗೆ ಒಗ್ಗಿಕೊಳ್ಳುತ್ತಿದ್ದವು. ಈ ಕತ್ತಲು, ಮೌನ, ಅದಿನ್ನೊಂದಿಷ್ಟು ಹೊತ್ತು, ಮತ್ತೆ ಬೆಳಕು ಬಂದೇ ಬರುವುದಲ್ಲ ಎಂಬ ಭರವಸೆ ಅವರಿಗೆ ಇದ್ದೇ ಇತ್ತು. ಅದೊಂದು ಹಕ್ಕಿ ಮಾತ್ರ ಸಧ್ಯಕ್ಕೆ ಕತ್ತಲು ಎಲ್ಲವನ್ನೂ ನುಂಗುತ್ತಿದೆಯೇನೋ ಎಂಬ ಹಾಗೆ “ಮೀ.. ಮೀ..” ಎಂದು ಅರಚುತ್ತಿತ್ತು. ಯಾವುದ್ಯಾವುದೋ ಹಕ್ಕಿ ಕೂಗಿತೆಂದೂ, ಯಾವುದೋ ಕೆಟ್ಟ ಸುದ್ದಿ…