ಸಮೃದ್ಧವಾದ ಕನ್ನಡ ಜಾನಪದ ಸಾಹಿತ್ಯದಲ್ಲಿ ಎದ್ದು ಕಾಣುವ ಒಂದು ಪ್ರಕಾರ ಬೀಸೋ ಕಲ್ಲಿನ ಪದಗಳು. ದೈನಂದಿನ ಕೆಲಸಗಳ ಭಾಗವಾದ ರಾಗಿಯನ್ನು ಬೀಸಿ ಹಿಟ್ಟನ್ನಾಗಿಸುವ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದ ಈ ಪದಗಳು ದಿನದಿಂದ ದಿನಕ್ಕೆ ಕೇಳುವುದು ಕಡಿಮೆಯಾಗುತ್ತಿದ್ದರೂ 4ನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಒಂದು ತ್ರಿಪದಿ ಇರುವುದು ಸಂತೋಷದ ವಿಷಯ. ಹಾಡುವ ಧಾಟಿ “ಕೂಸು ಇದ್ದ ಮನೆಗೆ ಬೀಸಣಿಗೆ….”. ಈ ಹಾಡಿನ ಹಿಂದೆ ಇರಬಹುದಾದ ಪುಟ್ಟ…