ನಮ್ಮ ಮನೆಯವರು “ಇವತ್ತು ನಾನು ಪಾತ್ರೆ ತೊಳೆದು ಕೊಡುತ್ತೇನೆ” ಎಂದು ಹೇಳಿದ್ದು ಕೇಳಿ ನಾನು ನಕ್ಕು ಬಿಟ್ಟೆ! ಇವತ್ತೆಂತ ವಿಶೇಷ?! ಯಾರ ಹುಟ್ಟಿದ ಹಬ್ಬವೂ ಅಲ್ಲ, ವಾರ್ಷಿಕೋತ್ಸವವೂ ಇಲ್ಲ. ಸಾಲದ್ದಕ್ಕೆ ರಜೆಯ ದಿವಸವೂ ಅಲ್ಲ. ಎಂತಾಯಿತು ಇವರಿಗೆ? ಕಣ್ಣು ಸ್ವಲ್ಪ ಕಿರಿದು ಮಾಡಿ, ಬಲದ ಹುಬ್ಬನ್ನು ಸ್ವಲ್ಪವೆ ಮೇಲೆತ್ತಿ, ತುಟಿಯ ಬಳಭಾಗ ಮಾತ್ರ ಸ್ವಲ್ಪ ಎಳೆದು “ನಮ್ಮ ಮನೆಯ ಪಾತ್ರವನ್ನಾ?” ಹೌದು ಎಂಬ…