ಮೂರು ಹನಿ ಬಾಳು

ದೋಣಿಗ ಹುಟ್ಟಂಗ, ಗಾಲಿಗ ಕೀಲಂಗಸಾಣಿಗ ಕಲ್ಲಿನ ಸೊಕ್ಕ !ಕಾಣದ ಕಾಮನ ಬಿಲ್ಲಿಗ ಹೆದೆಯಂಗಬಾಣಕ್ಕ ಇದ್ದ್ಹಂಗ ಪಕ್ಕ ಬಿಚ್ಚಿದ್ರ ನೆರಳಾತು ನೆಚ್ಚಿದ್ದ ಸೆರಗಾತುಕೆಚ್ಚೆದಿಗೆ ಸರಿ ವೀರಗಚ್ಚಿಕಚ್ಚಿದ್ದು ಕನಸಾತು, ಮುಚ್ಚಿದ್ದು ಮುನಿಸಾತು ಬಿಚ್ಚಿದ್ದು ಮನಸಾತು, ಹುಚ್ಚೇ! ಮುಂದಕ್ಕ ಹರದಾಳ ಚಂದಕ್ಕ ಬರತಾಳಹೊಂದಕ್ಕ ಯಲ್ಲವ್ನ ಕಾಲಮಂದಿಯಾಗಿನ ಕುರಿ ದೊಂದಿಯಾಗಿನ ಉರಿನಂದಕ್ಕ ಮೂರ್ಹನಿ ಬಾಳ. ಕರುಬಿಟ್ಟ ಕೆಚ್ಚಲು, ಬತ್ತೈತಿ ಬಚ್ಚಲುಮರುಗಕ ಎಲ್ಲೈತಿ ತೇವಮರದಂಗ ಇದ್ರಾತು ಬೇರೆ ಮರಿಯೋತಂಕಹಾರ್ಯಾವ ಹೊಟ್ಟೆಯ ಜೀವ…