ಶಿವ ಬರೆದ ಕಥೆಯ ಪುಟವೊಂದು ತೆರೆದು
ನನ್ನ ಮನೆ ಮೂಡಲಲಿ ಬೆಳಗಾಯಿತು1ಭೃಹತ್ಕಥೆಯನ್ನು ಶಿವನೇ ಪಾರ್ವತಿಗೆ ಹೇಳಿದನಂತೆ.
ಗಿರಿಸುತೆಯೆ ಕಿವಿಯ ಒಳಗಿಂದ ಹರಿದು
ಕಣ್ಣ ಹನಿಯೊಸರಿ ಪಾವನವಾಯಿತು2ಆ ಕಥೆಯನ್ನು ಕಿವಿಯಿಂದ ಕೇಳಿ, ಭಾವಾವೇಶದ ಅಶ್ರುಗಳು (ಜಹ್ನುವಿನ ಕಿವಿಯಿಂದ ಬಂದ)ಗಂಗೆಯಾಗಿ ಮನಸ್ಸನ್ನು ಶುದ್ಧಮಾಡಿತು
ಉದಯನನ ಬೆರಳು ಮೀಟಿದರೆ ಸತತ
ವಾಸವಿಗೆ ಘೋಷವತಿ ಮುದವಾಯಿತು3ಭೃಹತ್ಕಥೆಯಲ್ಲಿ ಉದಯನವಾಸವದತ್ತೆಯರ ಕಥೆಯಿದೆ.
ವರರುಚಿಯ ಜೊತೆಯೊ ಚಾಣಕ್ಯಮತಿಯೊ
ಭಾರತಿಗೆ ಚಂದ್ರ ದರುಶನವಾಯಿತು4ಭೃಹತ್ಕಥೆಯಲ್ಲಿ ಚಂದ್ರಗುಪ್ತ ಚಾಣಕ್ಯನಿಂದ ಭರತ ಭೂಮಿಗೆ ಸಾಮ್ರಾಟನಾದುದೂ ಇದೆ.
ಅವ ತುಳಿದ ಕಲ್ಲು ಅವ ಮುರಿದ ಬಿಲ್ಲು 5ಭೃಹತ್ಕಥೆಯಲ್ಲಿ ಶ್ರೀರಾಮಾಯಣವಿದೆ, ಅಹಲ್ಯೆ, ಶಿವಧನುಸ್ಸು.
ಅವನಡೆದ ದಾರಿಯೇ ಶಿವವಾಯಿತು6 ಶ್ರೀರಾಮನ ಮಾರ್ಗವೇ ಸುಖಪ್ರದ
ಹಿರಿದಾದ ಕಥೆಯು ಬರಿದಾದ ತಲೆಯ
ತಗ್ಗಿಸಲು ಬಗ್ಗಿಸಲು ಮೊದಲಾಯಿತು7ಭೃಹತ್ ಕಥೆಯು, ಬರಿದೇ ಪೋಳ್ಳು ತುಂಬಿದ ತಲೆಗಳ ಅಹಂಕಾರ ತಗ್ಗಿಸಿ, ಸರಿದಾರಿಗೆ ಬಗ್ಗಿಸಲಿ. ಅದರಲ್ಲಿನ ಪಾತ್ರಗಳ ದಾರಿ ನಮಗೆ ಮೇಲ್ಪಙ್ತಿಯಾಗಲಿ
ಗಣೇಶಕೃಷ್ಣ ಶಂಕರತೋಟ
೬ ಮಾರ್ಚ್ ೨೦೨೧
I tweet @ganeshkrishna

This work is licensed under a Creative Commons Attribution-NonCommercial-NoDerivatives 4.0 International License.