ಚಕ್ರ

ಮಡಿಯಿಂದ ಬಂದಳು, ಮುಡಿತೊಳೆದು ಬಂದಳುಕುಡುತುಂಬಿದಾ ಮೊರದ ಮೊರೆಗೆ.ಒಡಲ ತುಂಬಿಸುವಮ್ಮ, ಕೆಡ್ಡಾಸ ಮುಗಿಸಮ್ಮಬಿಡಿಸಮ್ಮ ಮೊಗ್ಗಿನ ನಗುವ. ಚಳಿಗಲ್ಲು ಹರಿದಾವು, ಬಿಳಿಮಲ್ಲೆ ಬಿರಿದಾವುನಳನಳಿಸೋ ಸುರಗಿಯ ಸೆರಗು.ಕಳಕಳಿಯ ಕಣ್ಣೋಟ, ಚಿಲಿಪಿಲಿಯ ಚೆಲ್ಲಾಟ,ಒಳಗೆಲ್ಲೋ ಹುಟ್ಟಿನ ಬೆರಗು. ಕೊರಡಲ್ಲಿ ಚಿಗುರೊಡೆಸು, ಬರದಲ್ಲೇ ಮಳೆ ಬರಿಸುಮರಳಲ್ಲೇ ಕಾದಿದೆ ಸೃಷ್ಟಿ.ಮರದಲ್ಲಿ ಹಣ್ಣಿಡಿಸು, ಮರಿಗಳ ಕಣ್ಬಿಡಿಸು,ಭರವಸೆ ಅಮ್ಮನ ದೃಷ್ಟಿ. ಗಣೇಶಕೃಷ್ಣ ಶಂಕರತೋಟFeb 27 2022 ಕೆಡ್ಡಾಸ = ಕೆಡ್ವಾಸ, ಭೂತಾಯಿ ಮುಟ್ಟಿನಿಂದ ಎದ್ದುಬರುವ ದಿನ,…

ಮೇಲ್ಪಙ್ಕ್ತಿ

ಶಿವ ಬರೆದ ಕಥೆಯ ಪುಟವೊಂದು ತೆರೆದುನನ್ನ ಮನೆ ಮೂಡಲಲಿ ಬೆಳಗಾಯಿತುಗಿರಿಸುತೆಯೆ ಕಿವಿಯ ಒಳಗಿಂದ ಹರಿದುಕಣ್ಣ ಹನಿಯೊಸರಿ ಪಾವನವಾಯಿತು ಉದಯನನ ಬೆರಳು ಮೀಟಿದರೆ ಸತತವಾಸವಿಗೆ ಘೋಷವತಿ ಮುದವಾಯಿತುವರರುಚಿಯ ಜೊತೆಯೊ ಚಾಣಕ್ಯಮತಿಯೊಭಾರತಿಗೆ ಚಂದ್ರ ದರುಶನವಾಯಿತು ಅವ ತುಳಿದ ಕಲ್ಲು ಅವ ಮುರಿದ ಬಿಲ್ಲು ಅವನಡೆದ ದಾರಿಯೇ ಶಿವವಾಯಿತುಹಿರಿದಾದ ಕಥೆಯು ಬರಿದಾದ ತಲೆಯತಗ್ಗಿಸಲು ಬಗ್ಗಿಸಲು ಮೊದಲಾಯಿತು ಗಣೇಶಕೃಷ್ಣ ಶಂಕರತೋಟ೬ ಮಾರ್ಚ್ ೨೦೨೧ I tweet @ganeshkrishna This…