ಎಷ್ಟರ ಷಕಾರ

ಮೃತ್-ಶಕಟಿಕಾ ನಾಟಕದ ಖಳನಾಯಕನಿಗೆ ಸ-ಕಾರ ಹೇಳಲು ಬಾರದೆ ಶ ಶ ಎಂದು ಹೇಳುತ್ತಿರುತ್ತಾನೆ. ಆ ಪಾತ್ರದ ಹೆಸರೇ “ಶಕಾರ”. ಕನ್ನಡದಲ್ಲಿ ಶಕಾರ ಷಕಾರಗಳನ್ನು ಸಾಕಾರ ಮಾಡುವ ಸಣ್ಣ ಪ್ರಯತ್ನ ಕೆಳಗಿದೆ. ಅಡಿ ಟಿಪ್ಪಣಿಗಳಿಗೆ ಸಂಖ್ಯೆಯನ್ನು ಒತ್ತಿ ಕನ್ನಡದಲ್ಲೇ ಹುಟ್ಟಿದ ಷಕಾರ ಶಬ್ದ ಕನ್ನಡದಲ್ಲಿ ಷಕಾರ ಇರುವುದು ಸಂಸ್ಕೃತ ಮೂಲದ ಶಬ್ದಗಳಲ್ಲಿ ಮಾತ್ರ, ಕನ್ನಡ ಮೂಲದ ಶಬ್ದಗಳಲ್ಲಿ ಸಕಾರ ಮಾತ್ರ ಇದೆ. ಇದಕ್ಕೆ ಅಪವಾದ…

ಬೀಸೋಕಲ್ಲಿನ ಕಥೆ

ಸಮೃದ್ಧವಾದ ಕನ್ನಡ ಜಾನಪದ ಸಾಹಿತ್ಯದಲ್ಲಿ ಎದ್ದು ಕಾಣುವ ಒಂದು ಪ್ರಕಾರ ಬೀಸೋ ಕಲ್ಲಿನ ಪದಗಳು. ದೈನಂದಿನ ಕೆಲಸಗಳ ಭಾಗವಾದ ರಾಗಿಯನ್ನು ಬೀಸಿ ಹಿಟ್ಟನ್ನಾಗಿಸುವ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದ ಈ ಪದಗಳು ದಿನದಿಂದ ದಿನಕ್ಕೆ ಕೇಳುವುದು ಕಡಿಮೆಯಾಗುತ್ತಿದ್ದರೂ 4ನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಒಂದು ತ್ರಿಪದಿ ಇರುವುದು ಸಂತೋಷದ ವಿಷಯ. ಹಾಡುವ ಧಾಟಿ “ಕೂಸು ಇದ್ದ ಮನೆಗೆ ಬೀಸಣಿಗೆ….”. ಈ ಹಾಡಿನ ಹಿಂದೆ ಇರಬಹುದಾದ ಪುಟ್ಟ…

ಸಿಂಧುರ ವರ್ಣ

ಕರ್ಣಾಟಕ ಸಂಗೀತ ಕಲಿಯುತ್ತಿರುವ ಮಗುವಿನೊಂದಿಗೆ “ಶ್ರೀಇs ಗಣನಾಥ ಸಿಂದುರಾಅs ವರ್ಣ” ಎಂದು ಗುನುಗುನಿಸುತ್ತಾ…ಎಲಾ! ಗಣೇಶನಿಗೇಕೆ ಕೆಂಬಣ್ಣ, ಇದು ಸಿಂಧುರ = ಆನೆಯಿರಬೇಕು ಅನ್ನಿಸಿತು. ಹಾಗಾದರೆ ವರ್ಣ? ಕರ್ಣಾಟಕ ಸಂಗೀತದಲ್ಲಿ ಬಹುಕೃಷಿ ಮಾಡಿದ ಸ್ನೇಹಿತ ನಿಂದ ಸಾಹಿತ್ಯವನ್ನು ಪರೀಕ್ಷಿಸಿ ಹೇಳಿಸಿದೆ. (ಟಿಪ್ಪಣಿಗಳಿಗೆ ಸಂಖ್ಯೆಗಳನ್ನು ಕ್ಲಿಕ್ಕಿಸಿ) ಲಂಬೋದರ ಲಕುಮಿಕರಅಂಬಾಸುತ ಅಮರ ವಿನುತ ಶ್ರೀ ಗಣನಾಥ ಸಿಂಧುರ ವರ್ಣಕರುಣ ಸಾಗರ ಕರಿವದನ |ಲಂ|ಸಿದ್ಧ ಚಾರಣ ಗಣ ಸೇವಿತಸಿದ್ಧಿ…

ಕಡಲ್ಕೊರೆತದ ಅನುಕೂಲ

ಕೂಲಂಕುಷ ಸರಿಯೋ ಕೂಲಂಕಷವೋ? ಕೂಲಂಕಷವೇ ಸರಿ, ಆದರೆ ಯಾಕೆ? ಮೊನ್ನೆ ಒಬ್ಬರು twitter ನಲ್ಲಿ, ಸಂಸ್ಕೃತ (ಮತ್ತು by extension ಭಾರತೀಯ ಭಾಷೆಗಳಲ್ಲಿ) ಒಂದೇ ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಇದರಿಂದ confusion ಉಂಟಾಗುತ್ತದೆ ಎಂದರು. ವಿಷಯ ಇಷ್ಟೇ, ಎಲ್ಲಾ ಭಾಷೆಗಳಲ್ಲೂ ಶಬ್ದಗಳೊಳಗೇ ಅವುಗಳ ಅರ್ಥ ಹುದುಗಿರುತ್ತವೆ. ಅರ್ಥವನ್ನು ಶಬ್ದಕ್ಕೆ ಮೇಲಿಂದ ಅಂಗಿಯಂತೆ ತೊಡಿಸುವುದಲ್ಲ (dictionary…

ಭರತ

ಹಗಲೆಲ್ಲಾ ಮುಗಿದಿತ್ತು ಆಗಷ್ಟೇ, ಎಂದಿನಂತೆ ಕೇಕಯದ ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿ-ಮನುಷ್ಯರು ಅಂದಿನ ರಾತ್ರಿಯ ನೀರವ ಕತ್ತಲೆಗೆ ಒಗ್ಗಿಕೊಳ್ಳುತ್ತಿದ್ದವು. ಈ ಕತ್ತಲು, ಮೌನ, ಅದಿನ್ನೊಂದಿಷ್ಟು ಹೊತ್ತು, ಮತ್ತೆ ಬೆಳಕು ಬಂದೇ ಬರುವುದಲ್ಲ ಎಂಬ ಭರವಸೆ ಅವರಿಗೆ ಇದ್ದೇ ಇತ್ತು. ಅದೊಂದು ಹಕ್ಕಿ ಮಾತ್ರ ಸಧ್ಯಕ್ಕೆ ಕತ್ತಲು ಎಲ್ಲವನ್ನೂ ನುಂಗುತ್ತಿದೆಯೇನೋ ಎಂಬ ಹಾಗೆ “ಮೀ.. ಮೀ..” ಎಂದು ಅರಚುತ್ತಿತ್ತು. ಯಾವುದ್ಯಾವುದೋ ಹಕ್ಕಿ ಕೂಗಿತೆಂದೂ, ಯಾವುದೋ ಕೆಟ್ಟ ಸುದ್ದಿ…

ಮೂರು ಹನಿ ಬಾಳು

ದೋಣಿಗ ಹುಟ್ಟಂಗ, ಗಾಲಿಗ ಕೀಲಂಗಸಾಣಿಗ ಕಲ್ಲಿನ ಸೊಕ್ಕ !ಕಾಣದ ಕಾಮನ ಬಿಲ್ಲಿಗ ಹೆದೆಯಂಗಬಾಣಕ್ಕ ಇದ್ದ್ಹಂಗ ಪಕ್ಕ ಬಿಚ್ಚಿದ್ರ ನೆರಳಾತು ನೆಚ್ಚಿದ್ದ ಸೆರಗಾತುಕೆಚ್ಚೆದಿಗೆ ಸರಿ ವೀರಗಚ್ಚಿಕಚ್ಚಿದ್ದು ಕನಸಾತು, ಮುಚ್ಚಿದ್ದು ಮುನಿಸಾತು ಬಿಚ್ಚಿದ್ದು ಮನಸಾತು, ಹುಚ್ಚೇ! ಮುಂದಕ್ಕ ಹರದಾಳ ಚಂದಕ್ಕ ಬರತಾಳಹೊಂದಕ್ಕ ಯಲ್ಲವ್ನ ಕಾಲಮಂದಿಯಾಗಿನ ಕುರಿ ದೊಂದಿಯಾಗಿನ ಉರಿನಂದಕ್ಕ ಮೂರ್ಹನಿ ಬಾಳ. ಕರುಬಿಟ್ಟ ಕೆಚ್ಚಲು, ಬತ್ತೈತಿ ಬಚ್ಚಲುಮರುಗಕ ಎಲ್ಲೈತಿ ತೇವಮರದಂಗ ಇದ್ರಾತು ಬೇರೆ ಮರಿಯೋತಂಕಹಾರ್ಯಾವ ಹೊಟ್ಟೆಯ ಜೀವ…

ಕುರುಡನ ಜಯ

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ |ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ || ಧೃತರಾಷ್ಟ್ರನ ಹತಾಶೆಯ ಹಪಹಪದೊಂದಿಗೇ ಹರಿಯದೊಡಗುತ್ತದೆ ಮಹಾಕವಿ ಶ್ರೀವೇದವ್ಯಾಸರ ಮಹಾಭಾರತ ಮಹಾಕಾವ್ಯ. ಮೊದಲ ನೂರರಷ್ಟು ಶ್ಲೋಕಗಳು ಪೀಠಿಕೆ. ಇದರಲ್ಲಿ ಸೂತ ಪುರಾಣಿಕರು ನೈಮಿಷಾರಣ್ಯದಲ್ಲಿ ಯಜ್ಞಾನಂತರ ವಿಶ್ರಮಿಸುತ್ತಿದ್ದಾಗ, ಮೈಯೆಲ್ಲಾ ಕಿವಿಯಾಗಿ ಕಥೆ ಕೇಳಲುತ್ಸುಕರಾಗಿದ್ದ ತಮ್ಮ ಶಿಷ್ಯರಿಗೆ ಮಹಾಭಾರತದ ಕಥೆ ಹೇಳಲು ಆರಂಭಿಸಿದರು ಎನ್ನುವ ಪ್ರಸ್ತಾವನೆ ಬರುತ್ತದೆ. ಹಾಗೂ ಕಥೆಯ ಹಿನ್ನೆಲೆಯನ್ನೂ ಸ್ವಲ್ಪ…

Sojugada sooju mallige

ಕನ್ನಡದಲ್ಲಿದನ್ನೋದಲು ಇಲ್ಲಿ ಒತ್ತಿ Before the Isha foundation event on Feb 21 2020 I had not heard of this song. Couldn’t get enough of it, once I did. A search for the lyrics and meaning yielded not enough to my satisfaction. So I ventured to write…

ಸೋಜುಗದ ಸೂಜು ಮಲ್ಲಿಗೆ

Read this english here ೨೦೨೦ ಫೇಬ್ರವರಿ ೨೧ ರ ಮಾಹಾಶಿವರಾತ್ರಿಗೂ ಮುನ್ನ ಈ ಪದ್ಯದ ಇರವಿನ ಅರಿವೇ ಇರಲಿಲ್ಲ. ಅಂದು ಈಶ ಪ್ರತಿಷ್ಠಾನದಿಂದ ಆಯೋಜಿಸಲ್ಪಟ್ಟ ಜಾಗರಣೆ ಮತ್ತು ಜಾಗೃತಿಯ ಕಾರ್ಯಕ್ರಮದಲ್ಲಿ ಅನನ್ಯಾ ಭಟ್ ಅವರು ಹಾಡಿದ “ಸೋಜುಗದ ಸೂಜುಮಲ್ಲಿಗೆ” ಹಾಡು ಕೇಳಿದಷ್ಟೂ ಸಾಲದಾಯಿತು. ಹಲವು ಸಲ ಕೇಳಿದ ಬಳಿಕ ಈ ಜಾನಪದ ಹಾಡಿನ ಸಾಹಿತ್ಯಕ್ಕಾಗಿ, ತಾತ್ಪರ್ಯಕ್ಕಾಗಿ ಹುಡುಕಿದೆ ಮನಸ್ಸಮಾಧಾನವಾಗುವಷ್ಟು ಸಿಗಲಿಲ್ಲ. ಅದಕ್ಕೆ…