ತರಂಗ ಹಾಗೂ ಸುಧಾ ಪುಸ್ತಕಗಳಲ್ಲಿ ಪ್ರಕಟವಾಗುತ್ತಿದ್ದ ‘ಕಥೆಗಳು’ ನನ್ನಲ್ಲಿ ಕಥೆಗಳನ್ನು ಓದುವ ಅಭಿರುಚಿಯನ್ನು ಹುಟ್ಟುಹಾಕಿಸಿತು.. ಹೈಸ್ಕೂಲ್, ಪಿಯುಸಿ ದಿನಗಳಲ್ಲಿ ಮನೆಯ ಅಟ್ಟ ಹತ್ತಿ, ಅಲ್ಲಿ ಅಟ್ಟಿ ಇಟ್ಟು ಕಟ್ಟಿಟ್ಟ ಪುಸ್ತಗಳಲ್ಲಿ ತರಂಗ ಸುಧಗಳನ್ನು ಹುಡುಕಿ ಎತ್ತಿಟ್ಟು ಓದುವುದು ಒಂದು ನಿಧಿ ಶೋಧನೆಯಷ್ಟೇ ಉತ್ಸಾಹದ ವಿಷಯವಾಗಿತ್ತು. ಒಮ್ಮೆಮ್ಮೆ ಆ ಪುಸ್ತಕಗಳ ಅಟ್ಟಿಯ ಎಡೆಯಲ್ಲಿ ಯುಗಾದಿ,ದೀಪಾವಳಿ ವಿಷೇಶಾಂಕವೇನಾದರು ಸಿಕ್ಕಿದರೆ ಅಂದು ಹಬ್ಬವೆ ಸರಿ! ಅವುಗಳಲ್ಲಿ ಬರುವ…
Category: ಪುಸ್ತಕಗಳು
ವಿದ್ಯಾಭೂಷಣರ ಜೀವನ ಕಥನ ಈ ಸಲ ಊರಿಗೆ ಹೋಗಿ ಬರುವಾಗ ಪುತ್ತೂರಿನ ಒಂದು ಪುಟ್ಟ ಪುಸ್ತಕದಂಗಡಿಯಿಂದ ಒಂದೆರಡು ಕನ್ನಡ ಪುಸ್ತಕಗಳನ್ನು ಕೊಂಡು ತಂದಿದ್ದೆ. ಪ್ಲಾಸ್ಟಿಕ್ ಇಲ್ಲದೆ ಪತ್ರಿಕೆಯ ಒಂದು ಹಾಳೆಯಲ್ಲಿ ಆ ಪುಸ್ತಕಗಳನ್ನು ಇಟ್ಟು ಚೆಂದಕೆ ಕಟ್ಟಿ ಕೊಟ್ಟಿದ್ದರು ಅಂಗಡಿಯವರು. ಪ್ರಯಾಣ ಮುಗಿಸಿ ಮನೆಗೆ ಬಂದು ಪುಸ್ತಕಗಳನ್ನು ಕಟ್ಟ ಬಿಡಿಸಿ ಜೋಡಿಸಿಕೊಂಡ ಮೇಲೆ, ಕನ್ನಡ ಪತ್ರಿಕೆಯ ಆ ಹಾಳೆಯನ್ನೆತ್ತಿಕೊಂಡೆ. ಚಿಕ್ಕಂದಿನಿಂದಲೇ ಸಕ್ಕರೆ ಮಿಠಾಯಿ…
ಕಾದಂಬರಿ – ಸಹನಾ ವಿಜಯಕುಮಾರ್ ಕಾಶ್ಮೀರದ ಬಗ್ಗೆ ಬರೆದಿರುವ ಪುಸ್ತಕ ಎಂದ ಮೇಲೆ ಅದರಲ್ಲಿ ಖಂಡಿತಾ ಹೃದಯ ಹಿಂಡುವ ಕಥೆ ಇದ್ದೇ ಇದೆ, ಹೇಗಪ್ಪಾ ಓದುವುದು ಎಂಬ ತಳಮಳ ಒಂದೆಡೆ. “ಕಾಶ್ಮೀರ” ಎಂದು ಹೇಳುತ್ತಿರುವಾಗ ‘ಕಾ’ ಎಂದಾಗ ಬಾಯಿ ಮನಸ್ಸುಗಳು ತೆರೆದರೂ, ‘ಶ್ಮೀ’ ಎನ್ನುವಲ್ಲಿಗೆ ಮತ್ತೆ ಗಂಟಲನ್ನು ಹೃದಯಕ್ಕೆ ಸೇರಿಸಿ ಎಳೆದಂತೆ, ಅದೊಂದು ಭಾರವಾದ, ತಂತಿ ಮೀಟಿದ ಹಾಗೆ ಒಂದು ಅವ್ಯಕ್ತ ಭಾವ;…