ಹಗಲಿರುಳ ಹಲಗೆಯ ಹಾಡು

ಮೆತ್ತನೇ ಹತ್ತಿಯsಮೆತ್ತೆಗೇ ನೆತ್ತಿಯನ್ನೊತ್ತೆ ಅರಳಿತ್ತು ಆ ಇರುಳ ಹಗಲುಹೊತ್ತುಗೊತ್ತಿನ ಅರಿವುಇತ್ತು ಆ ಮತ್ತಿನಲುಎಚ್ಚರಿಸೆ ಅಚ್ಚರಿಯೆ ತಟ್ಟಿ ಹೆಗಲು ಬೆನ್ನುಡಿಗು ಮುನ್ನುಡಿಗುಕನ್ನಡಿಯು ನಡುವಿತ್ತುಅಡಿಗಡಿಗು ಬುಡಮೇಲು ಗೊಜಲು ಗೊಜಲುಉರುಳುತುರುಳುತ ಜಾವಸುರುಳಿಸುತ್ತಿದೆ ಭಾವಮುಗಿದಿತ್ತು ಕಥೆ ಮುನ್ನುಡಿಗು ಮೊದಲು ಅಳಿಸದಪಕ್ವ ಚಿತ್ತುಹಿಡಿ ಬಳಪ ಕ್ವಚಿತ್ತುಎಳೆದೆಳೆದು ಗೆರೆಯನ್ನು ಮಡಿಸಿ ಬೆರಳುಮೂಡಿತ್ತು ಉರುಟುರುಟೆಎಡಕೆ ಬಲಕೆಳೆದ ಗೆರೆಹಲಗೆಯೇ ಒಡಕೊಡಕು ಮಲಗು ಮರಳು -ಗಣೇಶಕೃಷ್ಣ ಶಂಕರತೋಟಏಪ್ರಿಲ್ ೨೪ ೨೦೧೯ ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ…

ಹಲಸಿನ ಪದ

(ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ) ಆಚ ಮನೆಯ ಅಟ್ಟುಂಬಳಂದ ಬತ್ತಾ ಇದ್ದೊಂದು ಪರಿಮ್ಮಳಾ. ಹಲಸಿನ ಹಣ್ಣಿನ ಸುಟ್ಟವು ಕಾಣ್ತು, ಎಣ್ಣೆಗೆ ಬಿಟ್ಟವು ಬಳಂಬಳ.. ಆಗಳೇ ಕಂಡಿದೆ ರೆಚ್ಚೆಯ ಗೂಂಜಿಯ ಗಡಸುಗ ಅಗುದು ತಿಂಬದರ. ವರ್ಷದ ಶುರುವಿನ ಹಲಸಿನ ಹಣ್ಣು, ಬಿಡ್ಲೆ ಎಡಿಗ ನಮಗದರ..? ಈಗಳೇ ಹೆರಟರೆ ಸಿಕ್ಕುಗು ಎನಗೂ ಅಚ್ಚುಮಿಯಕ್ಕ ಕೊಡದ್ದಿರ. ಬಪ್ಪಗ ನಾಲ್ಕು ಸೊಳೆತೆಕ್ಕೊಳೆಕ್ಕು ನಾಳಂಗೆ ದೋಸೆ ಮಾಡ್ವದರ.. ದೋಸೆಗೆ ಶುಂಠಿ…