There is no excerpt because this is a protected post.
Category: ಬರಹ
ನಮ್ಮ ಊರಿಗಿಂತ ಅಮೆರಿಕದವರು ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತದೆ ಉಳಿದ ಪ್ರಪಂಚ. ನಿಜವೂ ಹೌದು. ಹಾಗಿದ್ದರೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗರು ಹಾಗೆಯೇ ಇದ್ದಾರಾ? ಇಲ್ಲ ಎನ್ನುತ್ತಿದ್ದಾರೆ ಅರಿಝೋನದ ಕನ್ನಡಿಗರು. ಅರಿಝೋನ ಅಮೆರಿಕಾದ ಒಂದು ರಾಜ್ಯ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ತುಂಬಾ ಜನ ಕನ್ನಡಿಗರು ಇಲ್ಲಿ ವಾಸ ಮಾಡುತ್ತಾ ಇದ್ದಾರೆ. ಕೆಲವು ದಶಕಗಳ ಹಿಂದೆ ಹಲವು ಉತ್ಸಾಹಿ ಕನ್ನಡಿಗರು ಸೇರಿ ಕಟ್ಟಿದ…
ನಮ್ಮ ಮನೆಯವರು “ಇವತ್ತು ನಾನು ಪಾತ್ರೆ ತೊಳೆದು ಕೊಡುತ್ತೇನೆ” ಎಂದು ಹೇಳಿದ್ದು ಕೇಳಿ ನಾನು ನಕ್ಕು ಬಿಟ್ಟೆ! ಇವತ್ತೆಂತ ವಿಶೇಷ?! ಯಾರ ಹುಟ್ಟಿದ ಹಬ್ಬವೂ ಅಲ್ಲ, ವಾರ್ಷಿಕೋತ್ಸವವೂ ಇಲ್ಲ. ಸಾಲದ್ದಕ್ಕೆ ರಜೆಯ ದಿವಸವೂ ಅಲ್ಲ. ಎಂತಾಯಿತು ಇವರಿಗೆ? ಕಣ್ಣು ಸ್ವಲ್ಪ ಕಿರಿದು ಮಾಡಿ, ಬಲದ ಹುಬ್ಬನ್ನು ಸ್ವಲ್ಪವೆ ಮೇಲೆತ್ತಿ, ತುಟಿಯ ಬಳಭಾಗ ಮಾತ್ರ ಸ್ವಲ್ಪ ಎಳೆದು “ನಮ್ಮ ಮನೆಯ ಪಾತ್ರವನ್ನಾ?” ಹೌದು ಎಂಬ…
ರಾತ್ರಿ ಎಂಟು ಗಂಟೆಯ ಸುಗಮ ಬಸ್ ನಿಧಾನಕ್ಕೆ ಬೆಂಗಳೂರಿನ ಎಲ್ಲ ದಾರಿ ಮೂಸಿಕೊಂಡು, ಪೇಟೆ ಬಿಟ್ಟು ಮಂಗಳೂರಿನ ಕಡೆಗಿರುವ ಹೆದ್ದಾರಿಗೆ ಸೇರುವಾಗ ಹತ್ತೂವರೆ ಆಗಿಯೇ ಆಗುತ್ತಿತ್ತು. ಬೆಳಗ್ಗಿನ ಮೈಂದು ಬೀಳುವ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪಂಪವೆಲ್ ತಲುಪಿ ಇಳಿಯುವಾಗ, ಘಟ್ಟದ ತಿರುವುಗಳಲ್ಲಿ ಅಲುಗಾಡಿದ ಜೀವ ಒಮ್ಮೆಲೇ ಮೈಯೊಳಗೆ ಬಂದುಬಿಡುವುದು. ಗಡಿಬಿಡಿಯಲ್ಲಿ ಭಾರದ ಬ್ಯಾಗನ್ನು ಬೆನ್ನಿಗಿಡಲು ಪುರುಸೊತ್ತಿಲ್ಲದೆ ಬಸ್ಸಿನಿಂದ ಕೆಳಗಿಳಿಯುವ ಆತುರದಲ್ಲಿ, ಬ್ಯಾಗ್ ಇಳಿಸಿಕೊಡುತ್ತೇನೆನ್ನುವ…
“ಬಾಳೇ ಬಂಗಾರವಾಯಿತು.. ” ಚಿಕ್ಕವಳಿದ್ದಾಗ ಶಾಲೆಯ ಭಜನೆಯಲ್ಲಿ ಮೊದಲ ಬಾರಿಗೆ ಕೇಳಿದಾಗ, ನನ್ನ ತಲೆಯೊಳಗೆ, ಕಾಣದ ದೇವರ ಕೈಯಿಂದ ಚಿನ್ನದ ಬೆಳಕು ಬಂದು ಬಾಳೆ ಸಸಿಯ ಮೇಲೆ ಬಿದ್ದು, ಬಾಳೆ ಗಿಡವೆ ಒಂದು ಚಿನ್ನದ ಗಿಡವಾಗಿ ಮಾರ್ಪಾಡಾಗುವ ಕಲ್ಪನೆ ಕಟ್ಟಿತ್ತು. “ಬಾಳೆ ಚಿನ್ನದ್ದು ಯಾಕೆ ಬೇಕು?”, “ಉಮ್ಮ..!!” ಎಷ್ಟೋ ಅರ್ಥ ಆಗದ ವಿಷಯದಲ್ಲಿ ಇದೂ ಒಂದು. ಈಗಲೂ “ಬಾಳೆ ಬಂಗಾರವಾಯಿತು” ಪದ್ಯ ಕೇಳಿದಾಗ…
ನಮ್ಮ ಕಡೆ(ಎಲ್ಲಾ ಕಡೆ) ಕ್ಷೌರ ಮಾಡಿ ಬಂದ ಮೇಲೆ ಸ್ನಾನ ಮಾಡುವ ತನಕ ಮೈಲಿಗೆ ಅಂತ ಲೆಕ್ಕ. ಅವರನ್ನು ಯಾರೂ ಮುಟ್ಟಲಿಕ್ಕೆ ಇಲ್ಲ, ಅವರೂ ಯಾರನ್ನೂ, ಯಾವುದನ್ನೂ ಮುಟ್ಟುವ ಹಾಗಿಲ್ಲ. ಏನನ್ನೂ ಕುಡಿಯುವ ತಿನ್ನುವ ಹಾಗಿಲ್ಲ. ಅವರುಟ್ಟ ಬಟ್ಟೆಯನ್ನು ಅವರೇ ತೊಳೆದು, ಮಿಂದು ಬರುವವರೆಗೆ ಅವರು ಮೈಲಿಗೆಯೇ. ನಾವು ಚಿಕ್ಕವರಿದ್ದಾಗ ಯಾಕೆ ಕ್ಷೌರ ಮಾಡಿಸಿ ಬಂದವರನ್ನು ಮುಟ್ಟಬಾರದು ಎಂದು ಕೇಳುವುದಕ್ಕೆ “ಅವರು ಕಾಕೆ(ಕಾಗೆ)”…