ಕ್ಷೌರ

ನಮ್ಮ ಕಡೆ(ಎಲ್ಲಾ ಕಡೆ) ಕ್ಷೌರ ಮಾಡಿ ಬಂದ ಮೇಲೆ ಸ್ನಾನ ಮಾಡುವ ತನಕ ಮೈಲಿಗೆ ಅಂತ ಲೆಕ್ಕ. ಅವರನ್ನು ಯಾರೂ ಮುಟ್ಟಲಿಕ್ಕೆ ಇಲ್ಲ, ಅವರೂ ಯಾರನ್ನೂ, ಯಾವುದನ್ನೂ ಮುಟ್ಟುವ ಹಾಗಿಲ್ಲ. ಏನನ್ನೂ ಕುಡಿಯುವ ತಿನ್ನುವ ಹಾಗಿಲ್ಲ. ಅವರುಟ್ಟ ಬಟ್ಟೆಯನ್ನು ಅವರೇ ತೊಳೆದು, ಮಿಂದು ಬರುವವರೆಗೆ ಅವರು ಮೈಲಿಗೆಯೇ. ನಾವು ಚಿಕ್ಕವರಿದ್ದಾಗ ಯಾಕೆ ಕ್ಷೌರ ಮಾಡಿಸಿ ಬಂದವರನ್ನು ಮುಟ್ಟಬಾರದು ಎಂದು ಕೇಳುವುದಕ್ಕೆ “ಅವರು ಕಾಕೆ(ಕಾಗೆ)”…

ಅರಿಝೋನದಲ್ಲೊಂದು ಸುಮಧುರ ಸ್ವರ ಸಂಜೆ

ಶುಕ್ರವಾರ ಜನವರಿ 25, 2019 ರಂದು ಸಂಜೆ ಅರಿಝೋನ ಟೆಂಪಿಯಲ್ಲಿರುವ ವೆಂಕಟಕೃಷ್ಣ ಕ್ಷೇತ್ರದಲ್ಲಿ ಕನ್ನಡ ಸಂಘ ಅರಿಝೋನದ ವತಿಯಿಂದ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಶ್ರೀಮತಿ ನಂದಿನಿ ರಾವ್ ರ ಸಂಗೀತ ಕಾರ್ಯಕ್ರಮ `ಸಂಗೀತ ರಸಸಂಜೆ’ ಏರ್ಪಡಿಸಲಾಗಿತ್ತು. ಸಂಗೀತದ ಹಿಮ್ಮೇಳದಲ್ಲಿ ಸ್ಥಳೀಯ ಕಲಾವಿದರಾದ ಶ್ರೀ ದೀಪಕ್ ಕುಲಕರ್ಣಿ ಅವರು ಹಾರ್ಮೋನಿಯಂ,ಶ್ರೀ ಸಂದೀಪ್ ಶಿರಾ ಅವರು ತಬಲಾ ಹಾಗೂ ಶ್ರೀಮತಿ ಲಕ್ಷ್ಮೀ…

ನೆನಪೇ ಸಂಗೀತ

ವಿದ್ಯಾಭೂಷಣರ ಜೀವನ ಕಥನ ಈ ಸಲ ಊರಿಗೆ ಹೋಗಿ ಬರುವಾಗ ಪುತ್ತೂರಿನ ಒಂದು ಪುಟ್ಟ ಪುಸ್ತಕದಂಗಡಿಯಿಂದ ಒಂದೆರಡು ಕನ್ನಡ ಪುಸ್ತಕಗಳನ್ನು ಕೊಂಡು ತಂದಿದ್ದೆ. ಪ್ಲಾಸ್ಟಿಕ್ ಇಲ್ಲದೆ ಪತ್ರಿಕೆಯ ಒಂದು ಹಾಳೆಯಲ್ಲಿ ಆ ಪುಸ್ತಕಗಳನ್ನು ಇಟ್ಟು ಚೆಂದಕೆ ಕಟ್ಟಿ ಕೊಟ್ಟಿದ್ದರು ಅಂಗಡಿಯವರು. ಪ್ರಯಾಣ ಮುಗಿಸಿ ಮನೆಗೆ ಬಂದು ಪುಸ್ತಕಗಳನ್ನು ಕಟ್ಟ ಬಿಡಿಸಿ ಜೋಡಿಸಿಕೊಂಡ ಮೇಲೆ, ಕನ್ನಡ ಪತ್ರಿಕೆಯ ಆ ಹಾಳೆಯನ್ನೆತ್ತಿಕೊಂಡೆ. ಚಿಕ್ಕಂದಿನಿಂದಲೇ ಸಕ್ಕರೆ ಮಿಠಾಯಿ…

ಕಶೀರ

ಕಾದಂಬರಿ – ಸಹನಾ ವಿಜಯಕುಮಾರ್ ಕಾಶ್ಮೀರದ ಬಗ್ಗೆ ಬರೆದಿರುವ ಪುಸ್ತಕ ಎಂದ ಮೇಲೆ ಅದರಲ್ಲಿ ಖಂಡಿತಾ ಹೃದಯ ಹಿಂಡುವ ಕಥೆ ಇದ್ದೇ ಇದೆ, ಹೇಗಪ್ಪಾ ಓದುವುದು ಎಂಬ ತಳಮಳ ಒಂದೆಡೆ. “ಕಾಶ್ಮೀರ” ಎಂದು ಹೇಳುತ್ತಿರುವಾಗ ‘ಕಾ’ ಎಂದಾಗ ಬಾಯಿ ಮನಸ್ಸುಗಳು ತೆರೆದರೂ, ‘ಶ್ಮೀ’ ಎನ್ನುವಲ್ಲಿಗೆ ಮತ್ತೆ ಗಂಟಲನ್ನು ಹೃದಯಕ್ಕೆ ಸೇರಿಸಿ ಎಳೆದಂತೆ, ಅದೊಂದು ಭಾರವಾದ, ತಂತಿ ಮೀಟಿದ ಹಾಗೆ ಒಂದು ಅವ್ಯಕ್ತ ಭಾವ;…